Saturday, 7 November 2015

ನನಗಾಗಿ ನನ್ನ ಇಷ್ಟದಂತೆ ಇರಲಿ ,ನನ್ನಪಾಡಿಗೆ ಇರಲು ಬಿಡದ ಈ ಸಮಾಜದಲ್ಲಿ ಬದುಕಲೇಬೇಕಾದ ಪರಿಸ್ಥಿತಿ. ಬದುಕಿಗೆ ನಿಯಮಗಳ ಅಗತ್ಯ ಇಲ್ಲ ಆದರೆ ಎಲ್ಲರಿಗು ಬದುಕಿನಲ್ಲಿ ಅವರದೇ ಆದ ನಂಬಿಕೆಗಳು ಇರುತ್ತದೆ. I am sensitive ಈ ವಾಕ್ಯ ನನ್ನ ಬದುಕಿನ ಕಡು ಕಷ್ಟ ಪರಿಸ್ಥಿತಿಗೆ ತಂದಿದೆ  ಎನ್ನಬೇಕೆ that's why even I am sensitive about other's feelings. ಇದು ಸಂತಸದ ವಿಷಯ ಎನ್ನಲೇ.ನನ್ನ ಆಸಕ್ತಿ  ನನ್ನನ್ನು ಬಹಿರ್ಮುಕಳಾಗಿ ಪ್ರತಿಬಿಂಬಿಸುತ್ತದೆ .ಪ್ರಾಪಂಚಿಕ ಕಾರ್ಯಗಳು ನನ್ನ ಆಸಕ್ತಿಗಳಲ್ಲಿ ಇರುವುದರಿಂದ ಆ ಊಹೆ ಸಹಜ ಸಹಾ.ಆದರೆ ನನ್ನನ್ನು ನನ್ನೊಳಗೆ ಬೆಚ್ಚಿಬೀಳಿಸುವ ಸಂಗತಿ ಎಂದರೆ  I will participate in the maximum activities but I will be unattached to persons where as I am only in love with my interest but never with the people.ನನ್ನ ಈ ನಡವಳಿಕೆಗೆ ನನ್ನದೇ ಉತ್ತರ.ಇನ್ನೊಬ್ಬರ ಬಳಿ ಮಾತಾಡುವಾಗ ಪ್ರತಿ ಭಾರಿ ಇನ್ನೊಬ್ಬರ ಭಾವನೆಗೆ ಬೆಲೆ ಕೊಡುವ ನನಗೆ,ಇನ್ನೊಬ್ಬರ ನೊಯಿಸುವುದು ಇಷ್ಟವಿಲ್ಲ. ಹಾಗೆ ಮಾತು, ನಡವಳಿಕೆ,ಸಮಯ ಏನಕ್ಕೂ ಬೆಲೆ ಕೊಡದವರ ನಡುವೆ ಅವರ ಮಾತುಗಳ ಕೇಳಿಸಿಕೊಳ್ಳಲು ನಾನು ಅಸಹನೀಯಳು.ನಿರ್ಮಲವಾದ ಮನಸ್ಸನ್ನು ನಂಬಿರುವ ನನಗೆ ಇದನ್ನು ನೊಯಿಸಲು ಇಷ್ಟ ಇಲ್ಲ ಹಾಗೆಂದು ಸಮಾಜವನ್ನು ತಬ್ಬಲಾರೆ ಅದಕ್ಕಾಗಿ ನಾ ಹೀಗೆ.--------ಅನೂಹ್ಯ

Saturday, 10 October 2015


INTERNET

ಮೌನದ ಒಮ್ಮತ
ನಿನ್ನ ಈ ಸಹಮತ
ಕಳೆದೋಯ್ತು ನನ್ನ ಮಿಡಿತ
ಏನು ನಿನ್ನೀ ಸೆಳೆತ
     
ಚಾರುಶ್ರೀ ಕೆ ಎಸ್

Just can't live without internet

Wednesday, 7 October 2015

 


Each desire is having a great density. I don't know where it will end as what.

Sometiomes life will make you to fear.this is wrong statement but society will make you to feel so.again this will become wrong statement for the person who know realy what he is.If difficult  situation exist that is when we can't find someone like we on the way or if we are different from the normal routine of the people in the society it is strange to accept the condition.because the mean of happiness is different to us from others I BELIEVE WHAT I BELIEVE IS THE BEST.

ಬದುಕು

ಬಯಸಿದ್ದು ಸಿಗದಿದ್ದಾಗ
ಬಯಸದಿದ್ದದ್ದು ದೊರಕಿದಾಗ
ಅದರಿಂದಲು ಬಯಸುವುದೇ
         
           ಬದುಕು 

Tuesday, 6 October 2015

ಅರಿಯಬೇಕು

ನಾಅರಿಯೆ ನನ್ನರಿಯೆ ಏನರಿಯಲೆ
ಅರಿಯದ ಲೋಕಕ್ಕೆ ಅರಿಯದಾಗೆಬಂದು
ನನ್ನ ಅರಿತವರು ಇಡುವ ನಾಮತಿಳಿಯಲೆ
ನಿಘೂಡ ಹುಟ್ಟಿನ ಧ್ಯೇಯ ಅರಿಯಲೆ

ನಾಅರಿಯೆ  ನನ್ನರಿಯೆ ಏನರಿಯಲೆ
ಸಂಬಂಧ ಎಂಬ ಬೆಸುಗೆಗೆಮಾರಿಹೋಗಲೆ
ಬಂಧಗಳ ನಾಮಸ್ಮರಣೆ ಮಾಡಲೇ
ಮತಿಇಲ್ಲದಂತೆ ಇದಕ್ಕಾಗಿ ಹೆಣಗಾಡಲೆ

ನಾಅರಿಯೆ ,ನನ್ನರಿಯೆ, ಏನರಿಯಲೆ
ಪ್ರೀತಿಯೆಂಬ ಮಾಯೆಗೆ ಭಿಕ್ಷುವಾಗಲೆ
ಅರ್ಥವಿಲ್ಲದ ಪದಕ್ಕೆ ಭಾವತುಂಬಿ
ಅದರ ಸೆರೆಗೆ ಸಿಕ್ಕಿ ಸಾಯಲೆ


ನಾಅರಿಯೆ ,ನನ್ನರಿಯೆ, ಏನರಿಯಲೆ
ಹುಟ್ಟಿದಮೇಲೆ ಬವಣೆಯಾದರು ಬದುಕಬೇಕು
"ಹಣ" ವೆಂಬ ನಿರ್ಜೀವ ವಸ್ತುಗೆ ಜೀವವ
ಮರೆತು,ಹಗಲಿರುಳು ದುಡಿಯಲೇ

ನಾಅರಿಯೆ ,ನನ್ನರಿಯೆ, ಏನರಿಯಲೆ
ಸರ್ವಶ್ರೇಷ್ಠ ಈ ಜ್ಞಾನ, ಅಂತ್ಯವೇ ಇಲ್ಲದ
ಇದರ ಹುಡುಕಾಟದಲ್ಲಿ ನನ್ನಮರೆಯಲೆ
ತಿಳಿಯಲಾಗದದನ್ನು ತಿಳಿಯಲೇ

ನಾಅರಿಯೆ ,ನನ್ನರಿಯೆ, ಏನರಿಯಲೆ
ಅರಿಷಡ್ವರ್ಗಗಳೇ ನನ್ನ ಆಸ್ತಿ
ಮತ್ತೆ ಮಾಡಲೇ ನಾನು ಆಸ್ತಿಯ
 ಸುಳ್ಳಿನ ಶ್ರೇಣಿಯ ಏರಲೇ


ನಾಅರಿಯೆ ,ನನ್ನರಿಯೆ, ಏನರಿಯಲೆ
ಪ್ರೀತಿ, ಸಂಬಂಧ,ಹಣ,ವಿದ್ಯೆ ಯಾವುದು ಸತ್ಯ
ಪರಮನಿಷ್ಠ ಬಾಳಲಾರ,ಕ್ರೂರವ್ಯವಸ್ತೆಯು
ಸತ್ಯ,ಇದರ ವ್ಯಥೆಯು ಸತ್ಯ


ನಾಅರಿಯೆ ,ನನ್ನರಿಯೆ, ಏನರಿಯಲೆ
ಈ ಸಪ್ತಸಾಗರಗಳ ಅರಿಯಬಹುದು
ಆದರೆ ಅರಿಯಲಾರೆ ನಾನು ಈ ಮನಸ
ಸತ್ಯವ ಅಸತ್ಯ ದುಃಖವ ಸುಖ ಎನ್ನುವುದು
ಈ ಮನಸು ವಿಶಾಲವಾದುದು
ಸಪ್ತಸಾಗರ,ವಿಶ್ವ, ಸೃಷ್ಟಿಯ ಮೀರಿದುದು
ನಾ ಅರಿಯಬೇಕು ಈ ಮನಸ.


Monday, 5 October 2015

     ಜ್ಞಾನ ದಾಸೋಹಿ ಗುರುವಿಗೆ ನಮನ
      "ಗುರು" ಮನುಷ್ಯನ ಜೀವನದ ಅವಿಭಾಜ್ಯ ಅಂಗ.ಜೀವಿಯ ಜೈವಿಕ ಕ್ರಿಯೆಗಳು ಸುಗಮವಾಗಿ ನಡೆಯಲು ಜೀವಕೋಶಗಳ ನಡುವೆ,ಅಂಗಾಂಗಗಳ ನಡುವೆ ಹೊಂದಾಣಿಕೆಯ ಕಾರ್ಯನಡೆಯಲು ಮೆದುಳಿನ ಮಾರ್ಗದರ್ಶನ ಅಗತ್ಯ. ಗುರುವಿನ ವಿಶೇಷಣಗಳನ್ನು ಮೆದುಳಿನಲ್ಲಿ ಕಾಣಬಹುದು.ದೇಹಕ್ಕೆ ಮೆದುಳು ಗುರುವಿನಂತೆ. ಸಕ್ರಿಯವಾದ ಮೆದುಳು ಸ್ವಸ್ಥನ ಪುಣ್ಯ.ಸಮರ್ಪಕವಾಗಿ ಕಾರ್ಯ  ನಿರ್ವಹಿಸುವ ಮೆದುಳು ಇಲ್ಲದವರ ಬದುಕು ಜೀವನವನ್ನು ಗ್ರಹಿಸುವ, ವಿವಕ್ಷಿಸುವ,ತಿಳಿಯಲು  ಆಗದಂತೆ ಅಂಧಕಾರಕ್ಕೆ ತಳ್ಳುತ್ತದೆ.ವಾಸ್ತವವಾಗಿ ಇಂತಹ ಅಂಧಕಾರಕ್ಕೆ ಉಜ್ವಲವಾದ ಬೆಳಕನ್ನು ಕರುಣಿಸುವವನೇ ಗುರು.ಅದ್ವಯಾ ತಾರಕಾ ಉಪನಿಷತ್ತಿನ ೧೪, ೧೮,ಶ್ಲೋಕ ೫ ರಲ್ಲಿ  ಹೇಳಿರುವಂತೆ ಗುರುವಿನ ಅರ್ಥ "ಗುಕಾರೊಂಧಕಾರತ್ವಾತ್ ರುಕಾರೊ ತನ್ನಿವಾರಕಃ"  'ಗು' ಎಂದರೆ ಅಂಧಕಾರ, 'ರು' ಎಂದರೆ ನಾಶಪಡಿಸುವುದು .ಒಟ್ಟಾರೆಯಾಗಿ ಅಂಧಕಾರವನ್ನು ನಾಶಪಡಿಸಿ ಬೆಳಕಿನೆಡೆಗೆ ಕೊಂಡೊಯ್ಯುವವನೇ ಗುರು.
   ಪುರಾತ ಗ್ರಂಥಗಳಲ್ಲಿ 'ಗುರು' ಎಂಬ ಪದದ ಬಳಕೆ ಯೆಥೇಚ್ಛವಾಗಿ ಆಧ್ಯಾತ್ಮ ಗುರುಗಳಿಗೆ ಮಾತ್ರ ಉಪಯೋಗಿಸಲ್ಪಟ್ಟಿದೆ.ಗುರುವನ್ನು ಅತಿಮಾನುಷನಂತೆ ಆತನ ಹಿರಿಮೆಯನ್ನು ಬಣ್ಣಿಸಿದ್ದೂ ಉಂಟು."ಗುರು ಗೀತಾ"ದಲ್ಲಿ ಹೇಳಿರುವಂತೆ 'ಗು' ಎಂದರೆ ಗುಣಗಳನ್ನು ಮೀರಿ , 'ರು' ಎಂದರೆ ಆಕಾರ ರಹಿತವಾದ ವ್ಯಕ್ತಿ .ಗುರುವನ್ನು ಯಾವ ರೂಪದಲ್ಲಿಯಾದರು,ಯಾರಲ್ಲಿಯಾದರೂ,ಯಾವಾಗಾಲಾದರು ಕಾಣಬಹುದು. ದಾರಿತಪ್ಪಿದಾಗ ದಿಕ್ಕು ಸೂಚಿಸುವ ಯಾವುದೇ ಪ್ರಾಕೃತಿಕ, ಅಥವಾ ಜೈವಿಕ ಅಂಶ ಗುರುವಾಗಬಲ್ಲದು.ಭೌತಿಕ ರೂಪವೇ ಇಲ್ಲದ 'ಗುರು'ಎನ್ನುವ ಅಂಶ ಆಧ್ಯಾತ್ಮ ಲೋಕದ ಶ್ರೇಷ್ಠ ರತ್ನವೇ ಸರಿ.ಗುರುವನ್ನು  ಕಾಣದವರು ಮಾನಸಿಕವಾಗಿ ಅಂಧರಿದ್ದಂತೆ.ಸಂಸ್ಕೃತದಲ್ಲಿ ಅನಾಥ ಎನ್ನುವ ಪದಕ್ಕೆ "ಒಬ್ಬ ಗುರುವನ್ನೂ ಹೊಂದಿಲ್ಲದ ವ್ಯಕ್ತಿ  "   ಎನ್ನುವ ಅರ್ಥ ಇದೆ.ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ   "ಗುರು,ದೇವರು ಮತ್ತು ಸ್ವಯಂ(ಆತ್ಮ)"  ಈ ಮೂವರು ಪರಮ ಪೂಜ್ಯವಾದವರು ಎಂದು ಮೈತ್ರಯನಿಯ ಉಪನಿಷತ್ತಿನಲ್ಲಿ ತಿಳಿಸಲಾಗಿದೆ. ಇಂದು ಗುರು ಎನ್ನುವ ಪದ "ಶಿಕ್ಷಕ " ಎನ್ನುವ ಪದಕ್ಕೆ ಸಮನಾಗಿ ಉಪಯೋಗಿಸಲ್ಪಡುತ್ತಿದೆ.
" ಮಹಾಭಾರತದಲ್ಲಿ" ಕೃಷ್ಣ  ಅರ್ಜುನನಿಗೆ ಗೀತೋಪದೇಶ ಮಾಡಿದ ಸನ್ನಿವೇಶ ಜ್ಞಾನ ಸಂಪತ್ತನ್ನು ತುಂಬಿಸಿದ ಸಂವಾದ.ದಾಯಾದಿಗಳು ಮತ್ತು ಧರ್ಮ ಇವೆರಡರ ನಡುವೆ ಯಾವುದು ಮುಖ್ಯ?. ಧರ್ಮಕ್ಕಾಗಿ ನಮ್ಮನ್ನು  ಪೋಷಿಸಿ,ಪಾಲಿಸಿ,ನನ್ನೊಡನಿದ್ದ ಬಂಧುಗಳನ್ನು ಕೊಲ್ಲಬೇಕೆ ಎನ್ನುವ ಗೊಂದಲಕ್ಕೀಡಾದ ಅರ್ಜುನ ನಿರ್ದೇಶನಕ್ಕಾಗಿ,ಉತ್ತರಕ್ಕಾಗಿ ಕೃಷ್ಣನಲ್ಲಿ ಶಿಷ್ಯನಾಗಿ ಮೊರೆಇಡುತ್ತಾನೆ." ಭಗವದ್ಗೀತಾ ಬೋಧನೆ ಅಮೂಲ್ಯವಾದುದು.ಅಂದು ಮತ್ತು ಇಂದು ಜಾತಿ ಮತ ಭೇದವಿಲ್ಲದೆ ಉಕ್ಕಿ ಬರುವ ಭಕ್ತಿ, ಪ್ರೀತಿ, ಗೌರವ ಗುರುವಿನೆಡೆಗೆ ಮಾತ್ರ.ಗುರುವಿಲ್ಲದೆ ಶಕ್ತಿಯ ಪಕ್ವತೆಗೆ ಹೊರಳಾಡಿ,ದೊರಕಿದರೂ ದೊರಕದಂತಾಗುವ ಗುರುವನ್ನು ತನ್ನದೇ ರೂಪದಲ್ಲಿ ಕಾಣುವ ಏಕಲವ್ಯನ ಪಾತ್ರ ಮನಕಲುಕುವಂಥದ್ದು. ಗುರು ಕೃಪೆಯಿಂದಲೇ ಜನಿಸಿದ ,ಯುಕ್ತಿಯಿಂದ ಕೂಡಿದ್ದ ಅಭಿಮನ್ಯು ಚಕ್ರವ್ಯೂಹದಿಂದ ಹೊರಬರುವುದನ್ನು ಗುರು ತಿಳಿಸದೇ ಇದ್ದರಿಂದ ಶಕ್ತನಾದರು ರಣರಂಗದಲ್ಲಿ ಬಲಿಯಾಗುವ ಈ ಪಾತ್ರ ಗುರುವಿನ ಮಹತ್ವವನ್ನು ತಿಳಿಸುತ್ತದೆ. ಸ್ವ ಗುರುವಾಗಿ ಹಾಗೂ ಗುರು ಅನುಗ್ರಹಕ್ಕೆ ಒಳಗಾಗಿ ಸಾತ್ವಿಕ ಹೊಣೆ ನಿರ್ವಹಿಸಿದ ವಿದುರ ಮಾದರಿಯ ಗುರು.
ಪ್ರಸ್ತುತ ಜಗತ್ತಿನಲ್ಲಿ ಅಧ್ಯಾಪಕ,ಶಿಕ್ಷಕ ಈ ರೀತಿ ಅನೇಕ ವೃತ್ತಿಗಳು ಗುರುವಿನ ಲಕ್ಷಣಗಳನ್ನು ಮಾತ್ರ ಒಳಗೊಂಡಿವೆ.ನೈಜವಾಗಿ ಸಂಪೂರ್ಣವಾಗಿ ಗುರುವಾಗಿ ಜೀವನ ನಡೆಸುವವರು ಸಮಾಜದಲ್ಲಿ ಕಂಡು ಬರುವುದು ಬಹಳ ವಿರಳವಾಗಿದೆ.ಅಧ್ಯಾಪಕರುಗಳು ತಮ್ಮ ವೃತ್ತಿಯನ್ನು ಜೀವನಕ್ಕಾಗಿ ನಡೆಸುವಂತೆ ಮಾತ್ರ ಕಂಡುಬರುತ್ತದೆ. ಶಿಷ್ಯರ ಮೇಲಿನ ಜವಾಬ್ದಾರಿ, ಪ್ರೀತಿ  ಇಂದಿನ ಸಮಾಜಕ್ಕೆ ಬೇಕಿಲ್ಲವಾದಂತೆ ಹಾಗೂ ಅಧ್ಯಾಪಕರ ಜೀವನದಲ್ಲಿ ಇದು ಪ್ರಮುಖವಾದ ವಿಷಯವಲ್ಲವಾದಂತೆ ತಿಳಿದುಬರುತ್ತದೆ. ಇವರ ನಡುವೆಯು ಸರ್ವಪಲ್ಲಿ ರಾಧಾಕೃಷ್ಣನ್ರವರಂತಹ  ಆದರ್ಶ ಅಧ್ಯಾಪಕರು ಕಾಣಸಿಗುತ್ತಾರೆ.೨೦೧೨ ಗಣತಿಯ ಪ್ರಕಾರ ಭಾರತದಲ್ಲಿ ೨,೧೩೭,೦೦೦ ರಷ್ಟು ಶಿಕ್ಷಕರಿದ್ದಾರೆ.ಜನಸಂಖ್ಯೆಯ ಮಹಾಪೂರವೇ ಹೊಂದಿರುವ ಭಾರತಕ್ಕೆ ಇವರ ಅವಶ್ಯಕತೆ ಇದೆ.ಆದರೆ ಇವರಿಗೆ  ಬೋಧನೆಗಿಂತಾ ಇತರೆ ಹೊರೆಗಳು ಅವರ ವೃತ್ತಿಯ ಭಾಗವಾಗಿವೆ.ರಾಷ್ಟ್ರದ ಮುಂದಿನ ಪ್ರಜೆಯ ನಿರ್ವಹಣೆಯಲ್ಲಿ ಕೆಲಸಗಳ್ಳತನ ತೋರುವ ಅನೇಕ ಶಿಕ್ಷಕರಿಂದ ವಿದ್ಯಾರ್ಥಿಗಳ ಜೀವನಕ್ಕೆ ತೊಂದರೆಯಾಗುತ್ತಿದೆ.
ಸರ್ವಶ್ರೇಷ್ಠವಾದ ವಿದ್ಯಾಧಾನ ಮಾಡುವ ಸರ್ವಶ್ರೇಷ್ಠವಾದ ವೃತ್ತಿ ಶಿಕ್ಷಕವೃತ್ತಿ .ಇದು ಸದುಪಯೋಗವಾಗಬೇಕಿದೆ.ಶಿಕ್ಷಕನಿಗೆ ನೀಡಬೇಕಾದ ಗೌರವಕೂಡ ಹೆಚ್ಚಬೇಕು.
ನಾ ಮೇಲೊ ನೀ  ಮೇಲೊ ಎಂದು ಬದುಕುವ ಇಂದಿನ ಪೀಳಿಗೆ ಗುರು ಇಲ್ಲದೆ ಬೇಕಾದುದನ್ನು 
ಸಾದಿಸಬಹುದು ಎಂದು ನಂಬಿದವರಿದ್ದಾರೆ.ಹಠ,ಛಲ,ಆಸೆಯಿಂದ ಸಾಧನೆ ಸಾಧ್ಯ.ಆದರೆ ಮೌಲ್ಯಯುತವಾದ,ಮಾನವೀಯತೆಯ,ತೃಪ್ತಿಕರವಾದ, ವ್ಯಕ್ತಿತ್ವ ರೂಪಗೊಳ್ಳಲು ಗುರುವಿನ ಸಾಕ್ಷಾತ್ಕಾರ ಅಗತ್ಯ.ಸಮಾಜ ನೀರಿನಂತೆ ,ಗುರು ನೀರನ್ನು ನೋಡುವ ವ್ಯಕ್ತಿಯಾದರೆ ಅದರ ಪ್ರತಿಬಿಂಬವೇ ಶಿಷ್ಯ. ಗುರುವೃಂದಕ್ಕೆ ನಮನ.
ರೈ ಎನ್ನುವ ಪದದ ಅರ್ಥ ಸಂಪತ್ತು,ಶೋಭೆ.ಇಂತಹ ಅನಂತ ಸಂಭ್ರಮವನ್ನು ಸಮಾಜಕ್ಕೆ ತಂದು  ಕೊಡುವವನೇ ರೈತ.ಇಂದು ನಾವು ಆಧುನಿಕತೆಯ ಅಮಲಿನಲ್ಲಿ,ಅಭಿವೃದ್ಧಿಯ ಓಟದಲ್ಲಿ ರಾಷ್ಟ್ರಕ್ಕೆ ಅನ್ನನೀಡುವ ರೈತನನ್ನು ಮರೆತಿದ್ದೇವೆ.ಪ್ರಸಕ್ತ ಸಂದರ್ಭದಲ್ಲಿ ರೈತರ ಆತ್ಮಹತ್ಯೆಯ ಸಂಖ್ಯೆ  ತಾರಕಕ್ಕೇರಿದೆ.'ಭೂ ಸಂದಾಯ ಕಾಯಿದೆ ' ಎಷ್ಟು  ಮಟ್ಟಕ್ಕೆ ದೇಶದ ಅಭಿವೃದ್ಧಿಗೆ ಉಪಯುಕ್ತ ಎನ್ನುವುದನ್ನು  ಎಲ್ಲರೂ  ಊಹಿಸಬಲ್ಲರು.ಆದರೆ ಇದು ರೈತನ ಜೀವನದ ಮೇಲೆ  ಎಂತಹ ಪರಿಣಾಮ ಬೀರುತ್ತಿದೆ ಎಂದು  ಯೋಚಿಸಲು ನಮಗೆ  ಅಸಾಧ್ಯವಾದುದು.
'ಭೂ ಸಂದಾಯ ಕಾಯಿದೆ ' ಪ್ರತಿಯೊಬ್ಬ ರೈತನ ವಿವರಗಳನ್ನು  ಪರಿಶೀಲಿಸಿ. ಆತನ ಭೂಮಿಯನ್ನು  ವಶಪಡಿಸಿಕೊಂಡು  ಆತನಿಗೆ  ಸರಿಯಾದ ಪರಿಹಾರವನ್ನು  ನೀಡುತ್ತದೆ. ಆದರೆ ಸರ್ವಕಾಲಿಕವಾಗಿ ಯಾವುದಾದರೊಂದು ರೂಪದಲ್ಲಿ ಫಲಕೊಡುವುದು ಭೂಮಿ ಎನ್ನುವ ಶಾಶ್ವತ ಸಂಪತ್ತಿಗೆ ಎಂತಹ ಪರಿಹಾರ ನೀಡಿದರು ಅದು ತಾತ್ಕಾಲಿಕವೆ.ಕಬ್ಬಿನ ರಸವನ್ನು  ಹೀರಿದಾಗ ಉಳಿಯುವ ತೊಗಟೆ ಹೇಗೊ ನೆಲಕಳೆದುಕೊಂಡ ರೈತನ ಜೀವನವು ಹಾಗೆ ಎರಡರಿಂದಲೂ  ಏನನ್ನೂ  ಮಾಡಲಾಗುವುದಿಲ್ಲ.
     ಭಾರತೀಯ ಸಂಪ್ರದಾಯದಲ್ಲಿ ರೈತ ಪ್ರಕೃತಿಗೆ ಕೊಟ್ಟಿರುವ ಸ್ಥಾನ ಅಮೂಲ್ಯವಾದದು.'ಪ್ರಕೃತಿ  ಮತ್ತು ಮನುಷ್ಯ' ಬೇರೆ ಬೇರೆ  ಅಲ್ಲ ಎನ್ನುವ ಸುಂದರ ಕಲ್ಪನೆಯನ್ನು  ಇದು ಒಳಗೊಂಡಿದೆ.ಮಗು ಹುಟ್ಟಿದಾಗ ಜೀರಿಗೆಯ ನೀರನ್ನು  ಕುಡಿಸುತ್ತೇವೆ ಭೂಮಿಯ
ಆ ತಂಪು ಮಗುವಿಗೆ ದೊರಕಲಿ ಎಂದು ಸತ್ತಾಗ ಎಳ್ಳುನೀರು ಬಿಡುತ್ತೇವೆ ಇದರ ಅರ್ಥ ಪ್ರಕೃತಿ  ಕೊಟ್ಟ ಜೀವ ಅದಕ್ಕೆ ಸಮಪಿರ್ತ ಎಂದು. ಈ ಮೇಲಿನವುಗಳಿಂದ ನಮಗೆ ತಿಳಿದು  ಬರುವುದೇನೆಂದರೆ ಮನುಷ್ಯ ಪ್ರಕೃತಿಗೆ ತನ್ನ ಕೃತಜ್ಞತೆಗಳನ್ನು ತನ್ನ ಬದುಕಿನ ರೀತಿ  ನೀತಿಗಳಲ್ಲೇ ಸೂಚಿಸುತ್ತಾನೆ.
ರೈತನ ಜೀವನವೇ ಆದ ಭೂಮಿಯನ್ನು ವಶಪಡಿಸಿಕೊಳ್ಳುವ
ಕಾರ್ಯ    ಸ್ವತಂತ್ರ ಪೂರ್ವದಿಂದಲೂ ನಡೆಯುತ್ತಿದೆ.೧೯೫೧ ರಲ್ಲಿ ಸರ್ಕಾರ ೨೧.೬ ಮಿಲಿಯನ್ಗಿಂತ ಹೆಚ್ಚು  ರೈತರ ಭೂಮಿಯನ್ನು ಕೈಗಾರಿಕರಣಕ್ಕಾಗಿ,ಗಣಿ,ಡ್ಯಾಮ್ ನಿರ್ಮಾಣಕ್ಕಾಗಿ ವಶಪಡಿಸಿಕೊಂಡಿತ್ತು.ಅವುಗಳಲ್ಲಿ  ಎಷ್ಟು  ನಡೆದಿವೆ,ನಿಂತಿವೆ,ಎಷ್ಟು ಸರಿಯಾದ. ಮಾರ್ಗದಲ್ಲಿ ಬಳಕೆಯಾಗಿವೆ ಎನ್ನುವುದಕಿಂತ.ಅಂದು ತಮ್ಮ ಜೀವನ ಕಳೆದುಕೊಂಡವರು ಎಷ್ಟು, ಸ್ಥಳಾಂತರಗೊಂಡು ಬದುಕು ಕಟ್ಟಿಕೊಳ್ಳಲು ಹೆಣಗಾಡಿದವರೆಷ್ಟೋ,ಅವರ ಸಂತತಿ ಇಂದಿಗೂ ಕೂಡ ತಮ್ಮ ಮೂಲಭೂತ ಸೌಕರ್ಯಗಳನ್ನು ಪಡೆಯಲಾಗದೆ ಅಲೆಮಾರಿ ಜೀವನವನ್ನು ನಡೆಸುತಿದ್ದಾರೆ.
ಕರ್ನಾಟಕದ ಕೊಲಾರದಲ್ಲಿ ಗಣಿಗಾಗಿ ನಡೆದ ಭೂ ವಶೀಕರಣ ಸಂದರ್ಭದಲ್ಲಿ ೨೦೦ಕ್ಕೂ ಹೆಚ್ಚು  ಜನ ತಮ್ಮ. ಭೂಮಿ ಕಳೆದುಕೊಂಡರು ರೈತನ ನೋವು ಎಂತಹದ್ದು ಎಂದರೆ ಆತ ತನ್ನ ಕಾಲಿಯಾದ ಗೋಡಾನನ್ನು ನೋಡುತ್ತಾ ಹೇಳುತ್ತಾನೆ 'ಯಾವಾಗಲು ಹಸಿರು,ಭತ್ತ,ಫಲದಿಂದ. ತುಂಬಿರುತಿದ್ದ ಈ ಜಾಗ ಇಂದು ಬರಿದಾಗಿದೆ ಎಲ್ಲೊ ಒಂದೊಂದು ಕಾಳುಗಳಿವೆ  ಆದರೆ ಅವನ್ನು ಹಾಕಲು ನೆಲವೇ ಇಲ್ಲ' ಎಂದು ಕಣ್ಣೀರಿಡುತ್ತಾರೆ.
ಭಾರತ ಪ್ರಜಾಪ್ರಭುತ್ವರಾಷ್ಟ್ರ ಇಲ್ಲಿ ಪರಮಾಧಿಕಾರವೇ ಅಂತ್ಯ.ಆದರೆ ಈ ಪರಮಾಧಿಕಾರ ಪ್ರಜೆಯ ಇಚ್ಛೆಗೆ ಅನುಗುಣವಾಗಿರಬೇಕು.ನಮ್ಮ ರಾಷ್ಟ್ರದ ಬಹು ಮಂದಿಯ ಕಸುಬೇ ಬೇಸಾಯ. ಅಂತಹದರಲ್ಲಿ ಇವರ ಅಭಿಪ್ರಾಯಕ್ಕೆ ಬೆಲೆ ಕೊಡದ ಕಾಯಿದೆ ಹೇಗೆ ಪರಮಾಧಿಕಾರವನ್ನು ಪ್ರತಿಪಾದಿಸುತ್ತದೆಯೋ ?
ಎಲ್ಲರೂ ಓಟದಲ್ಲಿದ್ದಾರೆ ನಾವು ಓಡುತಿದ್ದೇವೆ ಹಿಂದೆ ಉಳಿದವರ ಚಿಂತೆ ನಮಗೇಕೆ.ಆ ನೋವು ನಾವು ಹಿಂದೆ ಉಳಿದಾಗ ನಮಗೆ ಗೊತ್ತಾಗುತ್ತದೆ.ರೈತ ಅಳುತ್ತಾ  ತನ್ನ ಆಕ್ರಂದನದಲ್ಲಿ ಜೀವವನ್ನೇ ತ್ಯಜಿಸುತಿದ್ದಾನೆ.ಈ ಸಂದರ್ಭದಲ್ಲಿ ಮೌನವಾಗಿರುವ ನಮ್ಮ ಸಮಾಜಕ್ಕೆ ದಿಕ್ಕಾರವಿರಲಿ. ನಮ್ಮೆಲ್ಲರ ಬದುಕಿಗೆ ಕಾರಣನಾದ ರೈತ ಸಂತೋಷವಾಗಿ ಸಮೃದ್ಧಿಯಿಂದ ಬಾಳಬೇಕು ಎಂದು ಬಯಸುತ್ತಾ ಆತನ ನೋವಿಗೆ ಸ್ಪಂದನೆಯಾಗಿ ಈ ಚಿಕ್ಕ ಲೇಖನ.
ಕರ್ನಾಟಕ 
                                             
ಜಗದ್ವಿಖ್ಯಾತ ಸುಪುರುಷರ ನಿರ್ಗವಿದು .
ಸಂಪದ್ಬರಿತ ಸರ್ವಕಾಲಿಕ ಅವಂಧ್ಯಪೃತ್ವಿಇದು.   ಸೌಹಾರ್ದತೆಯ  ಅನಂತ ಶ್ರೇಷ್ಠತೆಯಬೀಡಿದು.  ರಾಷ್ಟ್ರಸೈನ್ಯದ  ಕಡದಾಳುಗಳ   ಮೂಲವಿದು.
ಸಪ್ತಸ್ವರಗಳ   ಶಾಸ್ತ್ರೀಯತೆಯ ನೆಲೆಇದು .      
ದೈವಿಕ    ಶಕ್ತಿದೇವತೆಗಳ   ಪುಣ್ಯಸ್ತಳವಿದು.
ಅಷ್ಟಜ್ಞಾನಿಗಳು  ಸಾಹಿತ್ಯ  ಭಂಡಾರವಿದು.
ಎಲ್ಲಿನಂತೆ    ತಪನುದಯ   ಪೂರ್ವದಿ.          
ಎಲ್ಲರ ಮನದಲಿ  ಅರಳಿದೆ  ಜಗಜ್ಯೋತಿ .
ಇದುವೆ   ನಾಡಿದು  ಕವಿರಾಜಮಾರ್ಗ.  
ಪ್ರಸಿದ್ಧಿ   ಪರಿಪೂರ್ಣ   ಕರ್ನಾಟಕ .
                       
                        ಚಾರುಶ್ರೀ ಕೆ ಎಸ್
ಪ್ರಪಂಚಕ್ಕೆ "ರಕ್ಷಾ " ಬಂಧನ









(It is impossible to find someone as near to me, it is not required also even i don't want to depend on others but still i found someone ,rear character. There is no reason why I like them a lot I will never expect anything back from them i like to stay far away from them but that person is best in my life I like to dedicate this to that best person)

ರಕ್ಷಾ ಬಂಧನ ಇದೊಂದು ಸಂಬಂಧಗಳನ್ನು ಬೆಳೆಸುವ ಅಪೂರ್ವ ಆಚರಣೆ.೬೦೦೦ ವರ್ಷಗಳ ಹಿಂದೆ ಇದ್ದಂತ ಹಿಂದೂ ಕಣಿವೆ ನಾಗರಿಕತೆಯ ಆರ್ಯರು ಸಮಾಜಕ್ಕೆ ನೀಡಿದ ಅಮೂಲ್ಯ ಕೊಡುಗೆ.ಆರ್ಯ ನಾರಿಯರು ತಮ್ಮ ಪತಿ,ಪುತ್ರ, ಸೋದರರಿಗೆ ಯುದ್ಧಕ್ಕೆ ಹೋಗುವಮುನ್ನ ಶುಭಹಾರೈಸುವಾಗ ಕಟ್ಟುತಿದ್ದ ಪವಿತ್ರ ನೂಲಿದು .ವಿಷ್ಣುಪುರಾಣ,ಭಾಗವತಪುರಾಣ,ಭವಿಷ್ಯತ್ಪುರಾಣ ಎಲ್ಲದರಲ್ಲಿಯೂ ರಕ್ಷಾಬಂಧನದ ಶ್ರೇಷ್ಠತೆಯ ಉಲ್ಲೇಖವಿದೆ.
ನಾನು ಚಿಕ್ಕವಳಿದ್ದಾಗ ನನ್ನ ಗೆಳೆತಿಯರು ಅವರ ಅಣ್ಣಂದಿರು, ಗೆಳೆಯರು  ಎಲ್ಲರಿಗೂ ರಾಕಿ ಕಟ್ಟುತಿದದ್ದನ್ನು ನೋಡಿ ನಾನು ನನ್ನ ತಂದೆಯನ್ನು ರಾಕಿ ಯಾಕೆ ಕಟ್ಟಬೇಕು ಎಂದು ಕೇಳಿದೆ.ರಕ್ಷಾಬಂಧನ ಸೋದರ ಸೋದರಿಯ ಸುಮಧುರ ಬಾಂಧವ್ಯದ ಸಂಕೇತ. ತಂಗಿ ತನ್ನ ಪ್ರೀತಿಯ ಭಾವದಿಂದ ಅಣ್ಣನಿಗೆ  ಸುಖ,ಸಂತೋಷ, ಅಷ್ಟೈಶ್ವರ್ಯ ದೊರಕಿ ಧೀರ್ಘಕಾಲ ಬಾಳಲಿ ಮತ್ತು ಕ್ಷೇಮವಾಗಿರಲಿ ಎಂದು ರಾಕಿ ಕಟ್ಟುತ್ತಾಳೆ.ಅಣ್ಣ ತಂಗಿಯ ಸಂಪೂರ್ಣ ರಕ್ಷಣಾತ್ಮಕ ಹೊರೆಯನ್ನು ಸ್ವೀಕರಿಸುವ ಹಬ್ಬ ಎಂದು ಹೇಳಿದರು.ಆಗ ನನ್ನ ಮನಸ್ಸಿಗೆ ಬಂದ ಪ್ರಶ್ನೆ ಪ್ರತಿಯೊಬ್ಬರ ರಕ್ಷಣೆ ಅವರ ವೈಯಕ್ತಿಕ ಅದನ್ನು ಇನೊಬ್ಬರ ಮೇಲೇಕೆ ಹೊರೆಸಬೇಕು. ನನ್ನ ಹುಂಬುತನದಿಂದ ಅಂದು ರಕ್ಷಾಬಂಧನದ ಹಿರಿಮೆಯನ್ನು ಅರಿಯುವಲ್ಲಿ ನಾನು ವಿಫಲಳಾದೆ.
ಪ್ರಪಂಚದ ಯಾವುದೋ ಮೂಲೆಯಿಂದಾ ತಂಗಿ ಅಣ್ಣನಿಗಾಗಿ ಪ್ರೀತಿಯ ಸಾಗರವನ್ನೇ ತುಂಬಿ ಕಳುಹಿಸುವಂತೆ ರಾಕಿಯನ್ನು ಕಳಿಸುತ್ತಾಳೆ.ಭಾರತದಲ್ಲಿ ಪಂಜಾಬಿನ ರೇಶ್ಮೆಯ ರಾಕಿ,ಗುಜರಾತಿನ ಬೆಳ್ಳಿರಾಕಿ,ಬಾಂಬೆಯ ಕಾರ್ಟೂನ್ ರಾಕಿ,ಮೈಸೂರಿನ ಶ್ರೀಗಂಧದ ರಾಕಿ, ದಕ್ಷಿಣ ಭಾರತದ ಜರಿರಾಕಿ ತುಂಬಾ ಪ್ರಸಿದ್ಧವು.ರಾಕಿ ಉದ್ದಿಮೆಗಳ ಕಾರ್ಯ ಹಬ್ಬದ ಆರು ತಿಂಗಳ ಹಿಂದಿನಿಂದಲೆ ಆರಂಭವಾಗುತ್ತದೆ.ಇದರಿಂದ ಸಾವಿರಾರು ಜನರಿಗೆ ಕೆಲಸ ಸಿಗುತ್ತದೆ.
ಹೆಣ್ಣಿನ ಚಲನೆಯ ವ್ಯಾಪ್ತಿ ಇಂದು ವಿಸ್ತರಿಸುತ್ತಿದೆ.ಎಲ್ಲಾ ವಿಭಾಗದಲ್ಲಿಯು ಹೆಣ್ಣು ಸಮರ್ತಳು ಎನ್ನುವುದು ಕಾಣುತ್ತಿದೆ.ಇದಕ್ಕೆ ಅವಕಾಶ ಕಲ್ಪಿಸಿಕೊಟ್ಟ ಸಮಾಜಕ್ಕೆ ಧನ್ಯವಾದ. ರಕ್ಷಾಬಂಧನದ ಉದ್ದೇಶ ಪರಸ್ಪರ ಗೌರವ ಪ್ರೀತಿ, ಕಾಳಜಿಯಾಗಿದ್ದೂ ಭಾರತೀಯತ್ವವನ್ನು ಸಾರುವ ಹಬ್ಬ.ಇಂದು ನಮ್ಮ ದೇಶದಲ್ಲಿ ಪ್ರತಿದಿನವೂ ೯೨ಕ್ಕೂ ಹೆಚ್ಚು ರೇಪ್ ನಡೆಯುತ್ತವೆ. Ncrb(national crime record bureau)  ಪ್ರಕಾರ ೨೦೧೩ರಲ್ಲಿ ೩೩,೭೦೭ ರೇಪ್ ಪ್ರಕರಣಗಳು ದಾಕಲಾಗಿವೆ ಇವುಗಳಲ್ಲಿ ೯೦%ರಷ್ಟು ಪ್ರಕರಣದ ಆರೋಪಿ ಪರಿಚಿತನೇ ಆಗಿರುತ್ತಾರೆ. ಇವುಗಳನ್ನು ನೋಡಿದಾಗ ಈ ಹಬ್ಬದ ನೈಜ ಮಹತ್ವ ಎಲ್ಲಿದೆ..? ಎಂದು ಬೇಸರವಾಗುತ್ತದೆ ಇದಕ್ಕೆ ಕಾರಣವಾದ ಸಮಾಜದ ಅಜ್ಞಾನ, ದುಷ್ಟತನಕ್ಕೆ ಕೊನೆಎಂದು?..ಪುರುಷನ ದೃಷ್ಟಿಕೋನ ಎಂದು ಬದಲಾಗುತ್ತದೆ.? ಬದಲಾವಣೆ ಶಿಕ್ಷಣದಿಂದ ಮಾತ್ರ ಸಾಧ್ಯ. ಇಂದು ಕೆಲವೆಡೆ ಅಲ್ಪ ಬದಲಾವಣೆ ಕಂಡುಬಂದರು ಅದು ಅಕ್ಷರಸ್ಥವಲಯದಲ್ಲಿ ಮಾತ್ರ.ರಾಕಿಯ ಶಕ್ತಿ ಇಲ್ಲಿ ಉಪಯೋಗ ವಾಗಬೇಕಿದೆ.ರವೀಂದ್ರನಾಥರು ಹಿಂದೂ ಮುಸಲ್ಮಾನರ ಸಂಬಂಧ ವೃದ್ಧಿಸಲು ರಕ್ಷಾಬಂಧನವನ್ನು ಉಪಯುಕ್ತ ಸಾಧನವಾಗಿ ಬೆಳಸಿದರು.ರಾಕಿಯನ್ನು ಕಟ್ಟುವುದರ ಜೊತೆ ಅದರ ಅರ್ಥಕ್ಕೆ ಅನುಗುಣವಾಗಿ ಬದುಕಬೇಕೆನ್ನುವುದು ಬಹು ಮುಖ್ಯವಾದುದು.
ಮನುಷ್ಯ ಸಂಘ ಜೀವಿ.ಅವಲಂಬನೆ ಎನ್ನುವುದು ಜೀವನದ ಒಂದು ಭಾಗ. ವಿಶ್ವ ಶಾಂತಿಯಿಂದ ಇರಲು.ಎಲ್ಲರಲ್ಲಿಯೂ ಪ್ರೀತಿ,ಅನ್ಯೋನ್ಯತೆ ಅಗತ್ಯ.ಇದನ್ನು ಕಲ್ಪಿಸಿಕೊಳ್ಳುವಲ್ಲಿ ರಕ್ಷಾಬಂಧನವು ಕಾರಣವಾಗಿದೆ. ಇದರ ಮಹತ್ವ ವಿಸ್ತರಿಸಬೇಕಾಗಿದೆ.ದೇಹಕ್ಕೆ ಹಸಿವು ಒಂದು ನೆಪ ಆದರೆ ಆಹಾರ ಜೀವನಾವಶ್ಯಕ ಎಲ್ಲರ ಸಮರಸದ ಜೀವನಕ್ಕೆ ರಕ್ಷಾಬಂಧನ ಒಂದು ನೆಪವಾದರು ಇದರಿಂದ ಎಲ್ಲರಲ್ಲಿ ಪ್ರೀತಿ ಇಮ್ಮಡಿಸುತ್ತದೆ.ರಾಷ್ಟ್ರಗಳ ನಡುವಿನ ಭಯೋತ್ಪಾದನೆ ,ಅಸೂಹೆ, ದ್ವೇಷ ಗಮನಿಸಿದಾಗ."ಪ್ರಪಂಚಕ್ಕೆ ರಕ್ಷ ಎನ್ನುವ ಪ್ರೀತಿಯ ಬಂಧನ ಅಗತ್ಯ "ಎಂದೆನ್ನಿಸುತ್ತದೆ.ಜಗತ್ತಿನ ರಾಷ್ಟ್ರರಾಷ್ಟ್ರದ, ಸೋದರ ಸೋದರಿಯ,ಮನುಜ ಮನುಜನ ಬಾಂಧವ್ಯ ಬೆಸೆಯುವ ರಕ್ಷಾಬಂಧನಕ್ಕ ನಾ ಋಣಿ.

ಸಾವು
ನಿನ್ನ ನೋಡುವ ನನ್ನೀ ತವಕ.
ನೀ ಅರಿಯಲಾರೆ ಓ ನನ್ನ  ಸಖ.
ಸುಳಿವೆ ಇಲ್ಲದೆ ಬಂದು
ನನ್ನ ಬಳಗಕೆ ಕೊಡುವೆ ನಿನ್ನ ಸುಖ
ಅಂದು ನಾನಾಗಿರುವೆ ನಿನ್ನ ಪರವಶ
ಓ ನನ್ನ ಪ್ರೀತಿಯ ಸಖ
ಬೆಂಬಿಡದೆ ನೀ ಇದ್ದೆ ನನ್ನಿಂದೆ
ಎಚ್ಚರಿಸಿದೆ ಕ್ಷಣ,ಕ್ಷಣ ಬೇಡವೆಂದು.
ಅಂದು ನಾ ಬಿಡಲಿಲ್ಲ
ನನ್ನ ಗರ್ವ,ಅಹಂಕಾರ, ದುಷ್ಟತನಗಳನ್ನು
ಇಂದು ನಾ ತೊಟ್ಟ ಕಣ್ಪಟ್ಟಿ ಜಾರಿದೆ.
ಇಂದು ನಾ ಕಳೆದುಕೊಂಡರು
ನನ್ನೀ ಜೀವನದ ಮೋಹವ.
ಲಿಂಗ ವರ್ಣ ಭೇದವಿಲ್ಲದ ಆತ್ಮಕೆ.
ಇಲ್ಲಿ ಎಲ್ಲವು ನಶ್ವರ, ನೀನೆ ಶಾಶ್ವತ.
ನನ್ನೀ ತವಕಕೆ ನೀ ತೋರಿದೆ
ನಾನೆ ಅರಿಯಲಾಗದ ಅಂತ್ಯವ.
ಈ ಗೌಣ ಜೀವನದ ಉತ್ತರ
ನೀನೆ ಅಲ್ಲವೆ ಓ ನನ್ನ ಸಖ
                              ಸಾವು.
ಚಾರುಶ್ರೀ ಕೆ ಎಸ್
Biet engineering college
Davanagere


Tuesday, 3 February 2015

NO MAN CAN BE AS PERFECT AS GANDHI

M.-K.-Gandhi-An-Autobiography-or-The-Story-of-my-Experiments-with-Truth.pdf