Monday, 5 October 2015

ಪ್ರಪಂಚಕ್ಕೆ "ರಕ್ಷಾ " ಬಂಧನ









(It is impossible to find someone as near to me, it is not required also even i don't want to depend on others but still i found someone ,rear character. There is no reason why I like them a lot I will never expect anything back from them i like to stay far away from them but that person is best in my life I like to dedicate this to that best person)

ರಕ್ಷಾ ಬಂಧನ ಇದೊಂದು ಸಂಬಂಧಗಳನ್ನು ಬೆಳೆಸುವ ಅಪೂರ್ವ ಆಚರಣೆ.೬೦೦೦ ವರ್ಷಗಳ ಹಿಂದೆ ಇದ್ದಂತ ಹಿಂದೂ ಕಣಿವೆ ನಾಗರಿಕತೆಯ ಆರ್ಯರು ಸಮಾಜಕ್ಕೆ ನೀಡಿದ ಅಮೂಲ್ಯ ಕೊಡುಗೆ.ಆರ್ಯ ನಾರಿಯರು ತಮ್ಮ ಪತಿ,ಪುತ್ರ, ಸೋದರರಿಗೆ ಯುದ್ಧಕ್ಕೆ ಹೋಗುವಮುನ್ನ ಶುಭಹಾರೈಸುವಾಗ ಕಟ್ಟುತಿದ್ದ ಪವಿತ್ರ ನೂಲಿದು .ವಿಷ್ಣುಪುರಾಣ,ಭಾಗವತಪುರಾಣ,ಭವಿಷ್ಯತ್ಪುರಾಣ ಎಲ್ಲದರಲ್ಲಿಯೂ ರಕ್ಷಾಬಂಧನದ ಶ್ರೇಷ್ಠತೆಯ ಉಲ್ಲೇಖವಿದೆ.
ನಾನು ಚಿಕ್ಕವಳಿದ್ದಾಗ ನನ್ನ ಗೆಳೆತಿಯರು ಅವರ ಅಣ್ಣಂದಿರು, ಗೆಳೆಯರು  ಎಲ್ಲರಿಗೂ ರಾಕಿ ಕಟ್ಟುತಿದದ್ದನ್ನು ನೋಡಿ ನಾನು ನನ್ನ ತಂದೆಯನ್ನು ರಾಕಿ ಯಾಕೆ ಕಟ್ಟಬೇಕು ಎಂದು ಕೇಳಿದೆ.ರಕ್ಷಾಬಂಧನ ಸೋದರ ಸೋದರಿಯ ಸುಮಧುರ ಬಾಂಧವ್ಯದ ಸಂಕೇತ. ತಂಗಿ ತನ್ನ ಪ್ರೀತಿಯ ಭಾವದಿಂದ ಅಣ್ಣನಿಗೆ  ಸುಖ,ಸಂತೋಷ, ಅಷ್ಟೈಶ್ವರ್ಯ ದೊರಕಿ ಧೀರ್ಘಕಾಲ ಬಾಳಲಿ ಮತ್ತು ಕ್ಷೇಮವಾಗಿರಲಿ ಎಂದು ರಾಕಿ ಕಟ್ಟುತ್ತಾಳೆ.ಅಣ್ಣ ತಂಗಿಯ ಸಂಪೂರ್ಣ ರಕ್ಷಣಾತ್ಮಕ ಹೊರೆಯನ್ನು ಸ್ವೀಕರಿಸುವ ಹಬ್ಬ ಎಂದು ಹೇಳಿದರು.ಆಗ ನನ್ನ ಮನಸ್ಸಿಗೆ ಬಂದ ಪ್ರಶ್ನೆ ಪ್ರತಿಯೊಬ್ಬರ ರಕ್ಷಣೆ ಅವರ ವೈಯಕ್ತಿಕ ಅದನ್ನು ಇನೊಬ್ಬರ ಮೇಲೇಕೆ ಹೊರೆಸಬೇಕು. ನನ್ನ ಹುಂಬುತನದಿಂದ ಅಂದು ರಕ್ಷಾಬಂಧನದ ಹಿರಿಮೆಯನ್ನು ಅರಿಯುವಲ್ಲಿ ನಾನು ವಿಫಲಳಾದೆ.
ಪ್ರಪಂಚದ ಯಾವುದೋ ಮೂಲೆಯಿಂದಾ ತಂಗಿ ಅಣ್ಣನಿಗಾಗಿ ಪ್ರೀತಿಯ ಸಾಗರವನ್ನೇ ತುಂಬಿ ಕಳುಹಿಸುವಂತೆ ರಾಕಿಯನ್ನು ಕಳಿಸುತ್ತಾಳೆ.ಭಾರತದಲ್ಲಿ ಪಂಜಾಬಿನ ರೇಶ್ಮೆಯ ರಾಕಿ,ಗುಜರಾತಿನ ಬೆಳ್ಳಿರಾಕಿ,ಬಾಂಬೆಯ ಕಾರ್ಟೂನ್ ರಾಕಿ,ಮೈಸೂರಿನ ಶ್ರೀಗಂಧದ ರಾಕಿ, ದಕ್ಷಿಣ ಭಾರತದ ಜರಿರಾಕಿ ತುಂಬಾ ಪ್ರಸಿದ್ಧವು.ರಾಕಿ ಉದ್ದಿಮೆಗಳ ಕಾರ್ಯ ಹಬ್ಬದ ಆರು ತಿಂಗಳ ಹಿಂದಿನಿಂದಲೆ ಆರಂಭವಾಗುತ್ತದೆ.ಇದರಿಂದ ಸಾವಿರಾರು ಜನರಿಗೆ ಕೆಲಸ ಸಿಗುತ್ತದೆ.
ಹೆಣ್ಣಿನ ಚಲನೆಯ ವ್ಯಾಪ್ತಿ ಇಂದು ವಿಸ್ತರಿಸುತ್ತಿದೆ.ಎಲ್ಲಾ ವಿಭಾಗದಲ್ಲಿಯು ಹೆಣ್ಣು ಸಮರ್ತಳು ಎನ್ನುವುದು ಕಾಣುತ್ತಿದೆ.ಇದಕ್ಕೆ ಅವಕಾಶ ಕಲ್ಪಿಸಿಕೊಟ್ಟ ಸಮಾಜಕ್ಕೆ ಧನ್ಯವಾದ. ರಕ್ಷಾಬಂಧನದ ಉದ್ದೇಶ ಪರಸ್ಪರ ಗೌರವ ಪ್ರೀತಿ, ಕಾಳಜಿಯಾಗಿದ್ದೂ ಭಾರತೀಯತ್ವವನ್ನು ಸಾರುವ ಹಬ್ಬ.ಇಂದು ನಮ್ಮ ದೇಶದಲ್ಲಿ ಪ್ರತಿದಿನವೂ ೯೨ಕ್ಕೂ ಹೆಚ್ಚು ರೇಪ್ ನಡೆಯುತ್ತವೆ. Ncrb(national crime record bureau)  ಪ್ರಕಾರ ೨೦೧೩ರಲ್ಲಿ ೩೩,೭೦೭ ರೇಪ್ ಪ್ರಕರಣಗಳು ದಾಕಲಾಗಿವೆ ಇವುಗಳಲ್ಲಿ ೯೦%ರಷ್ಟು ಪ್ರಕರಣದ ಆರೋಪಿ ಪರಿಚಿತನೇ ಆಗಿರುತ್ತಾರೆ. ಇವುಗಳನ್ನು ನೋಡಿದಾಗ ಈ ಹಬ್ಬದ ನೈಜ ಮಹತ್ವ ಎಲ್ಲಿದೆ..? ಎಂದು ಬೇಸರವಾಗುತ್ತದೆ ಇದಕ್ಕೆ ಕಾರಣವಾದ ಸಮಾಜದ ಅಜ್ಞಾನ, ದುಷ್ಟತನಕ್ಕೆ ಕೊನೆಎಂದು?..ಪುರುಷನ ದೃಷ್ಟಿಕೋನ ಎಂದು ಬದಲಾಗುತ್ತದೆ.? ಬದಲಾವಣೆ ಶಿಕ್ಷಣದಿಂದ ಮಾತ್ರ ಸಾಧ್ಯ. ಇಂದು ಕೆಲವೆಡೆ ಅಲ್ಪ ಬದಲಾವಣೆ ಕಂಡುಬಂದರು ಅದು ಅಕ್ಷರಸ್ಥವಲಯದಲ್ಲಿ ಮಾತ್ರ.ರಾಕಿಯ ಶಕ್ತಿ ಇಲ್ಲಿ ಉಪಯೋಗ ವಾಗಬೇಕಿದೆ.ರವೀಂದ್ರನಾಥರು ಹಿಂದೂ ಮುಸಲ್ಮಾನರ ಸಂಬಂಧ ವೃದ್ಧಿಸಲು ರಕ್ಷಾಬಂಧನವನ್ನು ಉಪಯುಕ್ತ ಸಾಧನವಾಗಿ ಬೆಳಸಿದರು.ರಾಕಿಯನ್ನು ಕಟ್ಟುವುದರ ಜೊತೆ ಅದರ ಅರ್ಥಕ್ಕೆ ಅನುಗುಣವಾಗಿ ಬದುಕಬೇಕೆನ್ನುವುದು ಬಹು ಮುಖ್ಯವಾದುದು.
ಮನುಷ್ಯ ಸಂಘ ಜೀವಿ.ಅವಲಂಬನೆ ಎನ್ನುವುದು ಜೀವನದ ಒಂದು ಭಾಗ. ವಿಶ್ವ ಶಾಂತಿಯಿಂದ ಇರಲು.ಎಲ್ಲರಲ್ಲಿಯೂ ಪ್ರೀತಿ,ಅನ್ಯೋನ್ಯತೆ ಅಗತ್ಯ.ಇದನ್ನು ಕಲ್ಪಿಸಿಕೊಳ್ಳುವಲ್ಲಿ ರಕ್ಷಾಬಂಧನವು ಕಾರಣವಾಗಿದೆ. ಇದರ ಮಹತ್ವ ವಿಸ್ತರಿಸಬೇಕಾಗಿದೆ.ದೇಹಕ್ಕೆ ಹಸಿವು ಒಂದು ನೆಪ ಆದರೆ ಆಹಾರ ಜೀವನಾವಶ್ಯಕ ಎಲ್ಲರ ಸಮರಸದ ಜೀವನಕ್ಕೆ ರಕ್ಷಾಬಂಧನ ಒಂದು ನೆಪವಾದರು ಇದರಿಂದ ಎಲ್ಲರಲ್ಲಿ ಪ್ರೀತಿ ಇಮ್ಮಡಿಸುತ್ತದೆ.ರಾಷ್ಟ್ರಗಳ ನಡುವಿನ ಭಯೋತ್ಪಾದನೆ ,ಅಸೂಹೆ, ದ್ವೇಷ ಗಮನಿಸಿದಾಗ."ಪ್ರಪಂಚಕ್ಕೆ ರಕ್ಷ ಎನ್ನುವ ಪ್ರೀತಿಯ ಬಂಧನ ಅಗತ್ಯ "ಎಂದೆನ್ನಿಸುತ್ತದೆ.ಜಗತ್ತಿನ ರಾಷ್ಟ್ರರಾಷ್ಟ್ರದ, ಸೋದರ ಸೋದರಿಯ,ಮನುಜ ಮನುಜನ ಬಾಂಧವ್ಯ ಬೆಸೆಯುವ ರಕ್ಷಾಬಂಧನಕ್ಕ ನಾ ಋಣಿ.

No comments:

Post a Comment