ಅರಿಯಬೇಕು
ನಾಅರಿಯೆ ನನ್ನರಿಯೆ ಏನರಿಯಲೆ
ಅರಿಯದ ಲೋಕಕ್ಕೆ ಅರಿಯದಾಗೆಬಂದು
ನನ್ನ ಅರಿತವರು ಇಡುವ ನಾಮತಿಳಿಯಲೆ
ನಿಘೂಡ ಹುಟ್ಟಿನ ಧ್ಯೇಯ ಅರಿಯಲೆ
ನಾಅರಿಯೆ ನನ್ನರಿಯೆ ಏನರಿಯಲೆ
ಸಂಬಂಧ ಎಂಬ ಬೆಸುಗೆಗೆಮಾರಿಹೋಗಲೆ
ಬಂಧಗಳ ನಾಮಸ್ಮರಣೆ ಮಾಡಲೇ
ಮತಿಇಲ್ಲದಂತೆ ಇದಕ್ಕಾಗಿ ಹೆಣಗಾಡಲೆ
ನಾಅರಿಯೆ ,ನನ್ನರಿಯೆ, ಏನರಿಯಲೆ
ಪ್ರೀತಿಯೆಂಬ ಮಾಯೆಗೆ ಭಿಕ್ಷುವಾಗಲೆ
ಅರ್ಥವಿಲ್ಲದ ಪದಕ್ಕೆ ಭಾವತುಂಬಿ
ಅದರ ಸೆರೆಗೆ ಸಿಕ್ಕಿ ಸಾಯಲೆ
ನಾಅರಿಯೆ ,ನನ್ನರಿಯೆ, ಏನರಿಯಲೆ
ಹುಟ್ಟಿದಮೇಲೆ ಬವಣೆಯಾದರು ಬದುಕಬೇಕು
"ಹಣ" ವೆಂಬ ನಿರ್ಜೀವ ವಸ್ತುಗೆ ಜೀವವ
ಮರೆತು,ಹಗಲಿರುಳು ದುಡಿಯಲೇ
ನಾಅರಿಯೆ ,ನನ್ನರಿಯೆ, ಏನರಿಯಲೆ
ಸರ್ವಶ್ರೇಷ್ಠ ಈ ಜ್ಞಾನ, ಅಂತ್ಯವೇ ಇಲ್ಲದ
ಇದರ ಹುಡುಕಾಟದಲ್ಲಿ ನನ್ನಮರೆಯಲೆ
ತಿಳಿಯಲಾಗದದನ್ನು ತಿಳಿಯಲೇ
ನಾಅರಿಯೆ ,ನನ್ನರಿಯೆ, ಏನರಿಯಲೆ
ಅರಿಷಡ್ವರ್ಗಗಳೇ ನನ್ನ ಆಸ್ತಿ
ಮತ್ತೆ ಮಾಡಲೇ ನಾನು ಆಸ್ತಿಯ
ಸುಳ್ಳಿನ ಶ್ರೇಣಿಯ ಏರಲೇ
ನಾಅರಿಯೆ ,ನನ್ನರಿಯೆ, ಏನರಿಯಲೆ
ಪ್ರೀತಿ, ಸಂಬಂಧ,ಹಣ,ವಿದ್ಯೆ ಯಾವುದು ಸತ್ಯ
ಪರಮನಿಷ್ಠ ಬಾಳಲಾರ,ಕ್ರೂರವ್ಯವಸ್ತೆಯು
ಸತ್ಯ,ಇದರ ವ್ಯಥೆಯು ಸತ್ಯ
ನಾಅರಿಯೆ ,ನನ್ನರಿಯೆ, ಏನರಿಯಲೆ
ಈ ಸಪ್ತಸಾಗರಗಳ ಅರಿಯಬಹುದು
ಆದರೆ ಅರಿಯಲಾರೆ ನಾನು ಈ ಮನಸ
ಸತ್ಯವ ಅಸತ್ಯ ದುಃಖವ ಸುಖ ಎನ್ನುವುದು
ಈ ಮನಸು ವಿಶಾಲವಾದುದು
ಸಪ್ತಸಾಗರ,ವಿಶ್ವ, ಸೃಷ್ಟಿಯ ಮೀರಿದುದು
ನಾ ಅರಿಯಬೇಕು ಈ ಮನಸ.
ನಾಅರಿಯೆ ನನ್ನರಿಯೆ ಏನರಿಯಲೆ
ಅರಿಯದ ಲೋಕಕ್ಕೆ ಅರಿಯದಾಗೆಬಂದು
ನನ್ನ ಅರಿತವರು ಇಡುವ ನಾಮತಿಳಿಯಲೆ
ನಿಘೂಡ ಹುಟ್ಟಿನ ಧ್ಯೇಯ ಅರಿಯಲೆ
ನಾಅರಿಯೆ ನನ್ನರಿಯೆ ಏನರಿಯಲೆ
ಸಂಬಂಧ ಎಂಬ ಬೆಸುಗೆಗೆಮಾರಿಹೋಗಲೆ
ಬಂಧಗಳ ನಾಮಸ್ಮರಣೆ ಮಾಡಲೇ
ಮತಿಇಲ್ಲದಂತೆ ಇದಕ್ಕಾಗಿ ಹೆಣಗಾಡಲೆ
ನಾಅರಿಯೆ ,ನನ್ನರಿಯೆ, ಏನರಿಯಲೆ
ಪ್ರೀತಿಯೆಂಬ ಮಾಯೆಗೆ ಭಿಕ್ಷುವಾಗಲೆ
ಅರ್ಥವಿಲ್ಲದ ಪದಕ್ಕೆ ಭಾವತುಂಬಿ
ಅದರ ಸೆರೆಗೆ ಸಿಕ್ಕಿ ಸಾಯಲೆ
ನಾಅರಿಯೆ ,ನನ್ನರಿಯೆ, ಏನರಿಯಲೆ
ಹುಟ್ಟಿದಮೇಲೆ ಬವಣೆಯಾದರು ಬದುಕಬೇಕು
"ಹಣ" ವೆಂಬ ನಿರ್ಜೀವ ವಸ್ತುಗೆ ಜೀವವ
ಮರೆತು,ಹಗಲಿರುಳು ದುಡಿಯಲೇ
ನಾಅರಿಯೆ ,ನನ್ನರಿಯೆ, ಏನರಿಯಲೆ
ಸರ್ವಶ್ರೇಷ್ಠ ಈ ಜ್ಞಾನ, ಅಂತ್ಯವೇ ಇಲ್ಲದ
ಇದರ ಹುಡುಕಾಟದಲ್ಲಿ ನನ್ನಮರೆಯಲೆ
ತಿಳಿಯಲಾಗದದನ್ನು ತಿಳಿಯಲೇ
ನಾಅರಿಯೆ ,ನನ್ನರಿಯೆ, ಏನರಿಯಲೆ
ಅರಿಷಡ್ವರ್ಗಗಳೇ ನನ್ನ ಆಸ್ತಿ
ಮತ್ತೆ ಮಾಡಲೇ ನಾನು ಆಸ್ತಿಯ
ಸುಳ್ಳಿನ ಶ್ರೇಣಿಯ ಏರಲೇ
ನಾಅರಿಯೆ ,ನನ್ನರಿಯೆ, ಏನರಿಯಲೆ
ಪ್ರೀತಿ, ಸಂಬಂಧ,ಹಣ,ವಿದ್ಯೆ ಯಾವುದು ಸತ್ಯ
ಪರಮನಿಷ್ಠ ಬಾಳಲಾರ,ಕ್ರೂರವ್ಯವಸ್ತೆಯು
ಸತ್ಯ,ಇದರ ವ್ಯಥೆಯು ಸತ್ಯ
ನಾಅರಿಯೆ ,ನನ್ನರಿಯೆ, ಏನರಿಯಲೆ
ಈ ಸಪ್ತಸಾಗರಗಳ ಅರಿಯಬಹುದು
ಆದರೆ ಅರಿಯಲಾರೆ ನಾನು ಈ ಮನಸ
ಸತ್ಯವ ಅಸತ್ಯ ದುಃಖವ ಸುಖ ಎನ್ನುವುದು
ಈ ಮನಸು ವಿಶಾಲವಾದುದು
ಸಪ್ತಸಾಗರ,ವಿಶ್ವ, ಸೃಷ್ಟಿಯ ಮೀರಿದುದು
ನಾ ಅರಿಯಬೇಕು ಈ ಮನಸ.
No comments:
Post a Comment