ರೈ ಎನ್ನುವ ಪದದ ಅರ್ಥ ಸಂಪತ್ತು,ಶೋಭೆ.ಇಂತಹ ಅನಂತ ಸಂಭ್ರಮವನ್ನು ಸಮಾಜಕ್ಕೆ ತಂದು ಕೊಡುವವನೇ ರೈತ.ಇಂದು ನಾವು ಆಧುನಿಕತೆಯ ಅಮಲಿನಲ್ಲಿ,ಅಭಿವೃದ್ಧಿಯ ಓಟದಲ್ಲಿ ರಾಷ್ಟ್ರಕ್ಕೆ ಅನ್ನನೀಡುವ ರೈತನನ್ನು ಮರೆತಿದ್ದೇವೆ.ಪ್ರಸಕ್ತ ಸಂದರ್ಭದಲ್ಲಿ ರೈತರ ಆತ್ಮಹತ್ಯೆಯ ಸಂಖ್ಯೆ ತಾರಕಕ್ಕೇರಿದೆ.'ಭೂ ಸಂದಾಯ ಕಾಯಿದೆ ' ಎಷ್ಟು ಮಟ್ಟಕ್ಕೆ ದೇಶದ ಅಭಿವೃದ್ಧಿಗೆ ಉಪಯುಕ್ತ ಎನ್ನುವುದನ್ನು ಎಲ್ಲರೂ ಊಹಿಸಬಲ್ಲರು.ಆದರೆ ಇದು ರೈತನ ಜೀವನದ ಮೇಲೆ ಎಂತಹ ಪರಿಣಾಮ ಬೀರುತ್ತಿದೆ ಎಂದು ಯೋಚಿಸಲು ನಮಗೆ ಅಸಾಧ್ಯವಾದುದು.
'ಭೂ ಸಂದಾಯ ಕಾಯಿದೆ ' ಪ್ರತಿಯೊಬ್ಬ ರೈತನ ವಿವರಗಳನ್ನು ಪರಿಶೀಲಿಸಿ. ಆತನ ಭೂಮಿಯನ್ನು ವಶಪಡಿಸಿಕೊಂಡು ಆತನಿಗೆ ಸರಿಯಾದ ಪರಿಹಾರವನ್ನು ನೀಡುತ್ತದೆ. ಆದರೆ ಸರ್ವಕಾಲಿಕವಾಗಿ ಯಾವುದಾದರೊಂದು ರೂಪದಲ್ಲಿ ಫಲಕೊಡುವುದು ಭೂಮಿ ಎನ್ನುವ ಶಾಶ್ವತ ಸಂಪತ್ತಿಗೆ ಎಂತಹ ಪರಿಹಾರ ನೀಡಿದರು ಅದು ತಾತ್ಕಾಲಿಕವೆ.ಕಬ್ಬಿನ ರಸವನ್ನು ಹೀರಿದಾಗ ಉಳಿಯುವ ತೊಗಟೆ ಹೇಗೊ ನೆಲಕಳೆದುಕೊಂಡ ರೈತನ ಜೀವನವು ಹಾಗೆ ಎರಡರಿಂದಲೂ ಏನನ್ನೂ ಮಾಡಲಾಗುವುದಿಲ್ಲ.
ಭಾರತೀಯ ಸಂಪ್ರದಾಯದಲ್ಲಿ ರೈತ ಪ್ರಕೃತಿಗೆ ಕೊಟ್ಟಿರುವ ಸ್ಥಾನ ಅಮೂಲ್ಯವಾದದು.'ಪ್ರಕೃತಿ ಮತ್ತು ಮನುಷ್ಯ' ಬೇರೆ ಬೇರೆ ಅಲ್ಲ ಎನ್ನುವ ಸುಂದರ ಕಲ್ಪನೆಯನ್ನು ಇದು ಒಳಗೊಂಡಿದೆ.ಮಗು ಹುಟ್ಟಿದಾಗ ಜೀರಿಗೆಯ ನೀರನ್ನು ಕುಡಿಸುತ್ತೇವೆ ಭೂಮಿಯ
ಆ ತಂಪು ಮಗುವಿಗೆ ದೊರಕಲಿ ಎಂದು ಸತ್ತಾಗ ಎಳ್ಳುನೀರು ಬಿಡುತ್ತೇವೆ ಇದರ ಅರ್ಥ ಪ್ರಕೃತಿ ಕೊಟ್ಟ ಜೀವ ಅದಕ್ಕೆ ಸಮಪಿರ್ತ ಎಂದು. ಈ ಮೇಲಿನವುಗಳಿಂದ ನಮಗೆ ತಿಳಿದು ಬರುವುದೇನೆಂದರೆ ಮನುಷ್ಯ ಪ್ರಕೃತಿಗೆ ತನ್ನ ಕೃತಜ್ಞತೆಗಳನ್ನು ತನ್ನ ಬದುಕಿನ ರೀತಿ ನೀತಿಗಳಲ್ಲೇ ಸೂಚಿಸುತ್ತಾನೆ.
ರೈತನ ಜೀವನವೇ ಆದ ಭೂಮಿಯನ್ನು ವಶಪಡಿಸಿಕೊಳ್ಳುವ
ಕಾರ್ಯ ಸ್ವತಂತ್ರ ಪೂರ್ವದಿಂದಲೂ ನಡೆಯುತ್ತಿದೆ.೧೯೫೧ ರಲ್ಲಿ ಸರ್ಕಾರ ೨೧.೬ ಮಿಲಿಯನ್ಗಿಂತ ಹೆಚ್ಚು ರೈತರ ಭೂಮಿಯನ್ನು ಕೈಗಾರಿಕರಣಕ್ಕಾಗಿ,ಗಣಿ,ಡ್ಯಾಮ್ ನಿರ್ಮಾಣಕ್ಕಾಗಿ ವಶಪಡಿಸಿಕೊಂಡಿತ್ತು.ಅವುಗಳಲ್ಲಿ ಎಷ್ಟು ನಡೆದಿವೆ,ನಿಂತಿವೆ,ಎಷ್ಟು ಸರಿಯಾದ. ಮಾರ್ಗದಲ್ಲಿ ಬಳಕೆಯಾಗಿವೆ ಎನ್ನುವುದಕಿಂತ.ಅಂದು ತಮ್ಮ ಜೀವನ ಕಳೆದುಕೊಂಡವರು ಎಷ್ಟು, ಸ್ಥಳಾಂತರಗೊಂಡು ಬದುಕು ಕಟ್ಟಿಕೊಳ್ಳಲು ಹೆಣಗಾಡಿದವರೆಷ್ಟೋ,ಅವರ ಸಂತತಿ ಇಂದಿಗೂ ಕೂಡ ತಮ್ಮ ಮೂಲಭೂತ ಸೌಕರ್ಯಗಳನ್ನು ಪಡೆಯಲಾಗದೆ ಅಲೆಮಾರಿ ಜೀವನವನ್ನು ನಡೆಸುತಿದ್ದಾರೆ.

ಕರ್ನಾಟಕದ ಕೊಲಾರದಲ್ಲಿ ಗಣಿಗಾಗಿ ನಡೆದ ಭೂ ವಶೀಕರಣ ಸಂದರ್ಭದಲ್ಲಿ ೨೦೦ಕ್ಕೂ ಹೆಚ್ಚು ಜನ ತಮ್ಮ. ಭೂಮಿ ಕಳೆದುಕೊಂಡರು ರೈತನ ನೋವು ಎಂತಹದ್ದು ಎಂದರೆ ಆತ ತನ್ನ ಕಾಲಿಯಾದ ಗೋಡಾನನ್ನು ನೋಡುತ್ತಾ ಹೇಳುತ್ತಾನೆ 'ಯಾವಾಗಲು ಹಸಿರು,ಭತ್ತ,ಫಲದಿಂದ. ತುಂಬಿರುತಿದ್ದ ಈ ಜಾಗ ಇಂದು ಬರಿದಾಗಿದೆ ಎಲ್ಲೊ ಒಂದೊಂದು ಕಾಳುಗಳಿವೆ ಆದರೆ ಅವನ್ನು ಹಾಕಲು ನೆಲವೇ ಇಲ್ಲ' ಎಂದು ಕಣ್ಣೀರಿಡುತ್ತಾರೆ.
ಭಾರತ ಪ್ರಜಾಪ್ರಭುತ್ವರಾಷ್ಟ್ರ ಇಲ್ಲಿ ಪರಮಾಧಿಕಾರವೇ ಅಂತ್ಯ.ಆದರೆ ಈ ಪರಮಾಧಿಕಾರ ಪ್ರಜೆಯ ಇಚ್ಛೆಗೆ ಅನುಗುಣವಾಗಿರಬೇಕು.ನಮ್ಮ ರಾಷ್ಟ್ರದ ಬಹು ಮಂದಿಯ ಕಸುಬೇ ಬೇಸಾಯ. ಅಂತಹದರಲ್ಲಿ ಇವರ ಅಭಿಪ್ರಾಯಕ್ಕೆ ಬೆಲೆ ಕೊಡದ ಕಾಯಿದೆ ಹೇಗೆ ಪರಮಾಧಿಕಾರವನ್ನು ಪ್ರತಿಪಾದಿಸುತ್ತದೆಯೋ ?

ಎಲ್ಲರೂ ಓಟದಲ್ಲಿದ್ದಾರೆ ನಾವು ಓಡುತಿದ್ದೇವೆ ಹಿಂದೆ ಉಳಿದವರ ಚಿಂತೆ ನಮಗೇಕೆ.ಆ ನೋವು ನಾವು ಹಿಂದೆ ಉಳಿದಾಗ ನಮಗೆ ಗೊತ್ತಾಗುತ್ತದೆ.ರೈತ ಅಳುತ್ತಾ ತನ್ನ ಆಕ್ರಂದನದಲ್ಲಿ ಜೀವವನ್ನೇ ತ್ಯಜಿಸುತಿದ್ದಾನೆ.ಈ ಸಂದರ್ಭದಲ್ಲಿ ಮೌನವಾಗಿರುವ ನಮ್ಮ ಸಮಾಜಕ್ಕೆ ದಿಕ್ಕಾರವಿರಲಿ. ನಮ್ಮೆಲ್ಲರ ಬದುಕಿಗೆ ಕಾರಣನಾದ ರೈತ ಸಂತೋಷವಾಗಿ ಸಮೃದ್ಧಿಯಿಂದ ಬಾಳಬೇಕು ಎಂದು ಬಯಸುತ್ತಾ ಆತನ ನೋವಿಗೆ ಸ್ಪಂದನೆಯಾಗಿ ಈ ಚಿಕ್ಕ ಲೇಖನ.
No comments:
Post a Comment